ಅಪಾರ್ಟ್​ಮೆಂಟ್​ನ 10ನೇ ಮಹಡಿಯ​​​ ಕಿಟಕಿಯಲ್ಲಿ ಸಿಲುಕಿದ್ದ ವಿಶೇಷಚೇತನ ಬಾಲಕನ ರಕ್ಷಣೆ! ವಿಡಿಯೋ ಇಲ್ಲಿದೆ ನೋಡಿ

ಬೃಹತ್ ಅಪಾರ್ಟ್​ಮೆಂಟ್​ವೊಂದರ​​​ ಕಿಟಕಿಯಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ವಿಶೇಷಚೇತನ ಬಾಲಕ ಆರುಷ್ ​(8) ಅಪಾರ್ಟ್​ಮೆಂಟ್​​ನ 11ನೇ ಪ್ಲೋರ್‌ನ ಬಾಲ್ಕನಿ ಮೂಲಕ ಹೊರ ಹೋಗಿ 10ನೇ ಮಹಡಿಯ​ ಕಿಟಕಿಯಲ್ಲಿ ಸಿಲುಕಿದ್ದನು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬಾಲಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.