ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಸುವುದು ಬಸನಗೌಡ ಯತ್ನಾಳ್ ಬಣದ ವನ್ ಪಾಯಿಂಟ್ ಅಜೆಂಡಾ ಅಗಿರುವಂತಿದೆ. ಆದರೆ, ಅವರ ಪ್ರಯತ್ನಗಳಿಂದ ವಿಚಲಿತರಾಗದ ವಿಜಯೇಂದ್ರ ಮಾತ್ರ ತಾನು ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದು ಹೇಳುತ್ತಾರೆ. ಒಂದು ವೇಳೆ ಅವರೇ ಮುಂದುವರಿದರೆ ಈಗ ನಡೆಯುತ್ತಿರುವ ಒಳಜಗಳಗಳು ಪ್ರಾಯಶಃ ನಿಲ್ಲಲಾರವು.