ದಾರಿ ತಪ್ಪಿ ಬೈತ್​ಕೋಲ್ ನೌಕಾನೆಲೆಗೆ ಬಂದ ಮೀನುಗಾರಿಕಾ ಬೋಟ್

ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈಕ್​ಕೋಲ್ ನೌಕಾನೆಲೆಗೆ ದಾರಿ ತಪ್ಪಿ ಬಂದ  ತಮಿಳುನಾಡಿನ ಮೀನುಗಾರಿಕಾ ಬೋಟ್​ನ್ನು (fishing boat) ನೌಕಾಪಡೆ ವಶಕ್ಕೆ ಪಡೆದುಕೊಂಡಿದೆ. ಬೋಟ್​ನಲ್ಲಿ ಐಸ್ ಖಾಲಿಯಾಗದ ಹಿನ್ನೆಲೆ ಬೋಟ್ ಬಂದರಿಗೆ ಬರಬೇಕಿತ್ತು. ಆದರೆ ಮೀನುಗಾರಿಕಾ ಬಂದರಿಗೆ ಬರುವ ಬದಲು ನೌಕಾನೆಲೆಗೆ ನುಗ್ಗಿದೆ.