ತಮಿಳುನಾಡಿನ ಸರ್ಕಾರಿ ಬಸ್ ಒಂದರಲ್ಲಿ ಫುಟ್ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ಆ ಬಸ್ ಚಾಲಕನಿಗೆ ಬುದ್ದಿ ಹೇಳುವ ಭರದಲ್ಲಿ ಕಾನೂನನ್ನು ಕೈಗೆತ್ತಿಕೊಂಡ ತಮಿಳುನಾಡಿನ ಬಿಜೆಪಿ ನಾಯಕಿ ಹಾಗೂ ಪೋಷಕ ನಟಿ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಹಾಗೂ ಸರ್ಕಾರಿ ನೌಕರರನ್ನು ನಿಂದಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ, ಇದೀಗ ಪೋಲಿಸರು ಆಕೆಯನ್ನು ಬಂಧಿಸಿದ್ದಾರೆ.