ಇವತ್ತು ಅವರು ಮಠಕ್ಕೆ ಬಂದಾಗ ಸ್ವಾಮಿಯ ತಂದೆ ಇರದ ಕಾರಣ ಹಣವನ್ನು ಮಠದ ಒಂದು ಭಾಗದಲ್ಲಿ ಇಟ್ಟು ಹೊರಬಂದಿದ್ದಾರೆ. ಹಣದ ಥೈಲಿ ಮಠದಲ್ಲಿಟ್ಟು ಹೊರಬರುವ ಮೊದಲು ಅವರು ಒಂದು ವಿಡಿಯೋ ಮಾಡಿಸಿದ್ದಾರೆ. ಅದರಲ್ಲಿ ಅವರು ಚೀಲದಲ್ಲಿರುವ ಹಣ ತೋರಿಸುತ್ತಾರೆ ಮತ್ತು ಜಿಪ್ ಎಳೆದು ಅದನ್ನು ಮುಚ್ಚಿ ಅದರ ಮೇಲೆ ಗೋಣಿಚೀಲ ಮುಚ್ಚಿದ ಬಳಿಕ ಕ್ಷೀಣವಾದ ಧ್ವನಿಯಲ್ಲಿ ‘ಹಾಲಶ್ರೀ ಅಭಿನವ ಸ್ವಾಮಿಗೆ ಸೇರಿದ ಹಣ ಇಲ್ಲಿಟ್ಟಿದ್ದೇನೆ’ ಅಂತ ಹೇಳುತ್ತಾರೆ.