ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ನಟಿಸಿರುವ ‘ವೀರಂ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಖದರ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಏಪ್ರಿಲ್ 7ರಂದು ‘ವೀರಂ’ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ರಚಿತಾಗೆ ಪ್ರಶ್ನೆ ಕೇಳಿ ಎಂದು ಆ್ಯಂಕರ್ ಮಾಧ್ಯಮದವರಿಗೆ ಹೇಳಿದರು. ಆಗ ರಚಿತಾ ರಾಮ್ ‘ಈ ಮೊದಲು ಬಂದವರಿಗೆ ಯಾರೂ ಪ್ರಶ್ನೆ ಕೇಳಿಲ್ಲ. ನಂಗೂ ಯಾರೂ ಪ್ರಶ್ನೆ ಕೇಳುವಂತಿಲ್ಲ’ ಎಂದರು.