‘ಪ್ರಾರ್ಥನೆ ಮಾಡಿದ ಬಳಿಕ ಮೂರೇ ತಿಂಗಳಲ್ಲಿ ಕೊರಗಜ್ಜನ ಪವಾಡ ನಡೆಯಿತು’: ನಟಿ ಮಾಲಾಶ್ರೀ

ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಇಂದು (ಆಗಸ್ಟ್​ 10) ಭೇಟಿ ನೀಡಿದ್ದಾರೆ. ಪುತ್ರಿ ಅನನ್ಯಾ ಮತ್ತು ಸ್ನೇಹಿತರ ಜೊತೆಗೆ ಬಂದು ಅವರು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಅವರು ಕೊರಗಜ್ಜ ದೈವದ ಬಗ್ಗೆ ಮಾತನಾಡಿದ್ದಾರೆ. ‘ಇದು ಶಕ್ತಿಶಾಲಿ ದೇವಸ್ಥಾನ ಎಂದು ನನ್ನ ಸ್ನೇಹಿತೆ ಹೇಳಿದ್ದರು. ನಾನು ಇಲ್ಲಿ ಪ್ರಾರ್ಥನೆ ಮಾಡಿ ಹೋದ ಬಳಿಕ ಮೂರೇ ತಿಂಗಳಲ್ಲಿ ಸಾಕಷ್ಟು ಪವಾಡಗಳು ಆಗಿವೆ. ತುಂಬ ಖುಷಿ ಎನಿಸುತ್ತದೆ. ಈ ಜಾಗದಲ್ಲಿ ಬಹಳ ಪಾಸಿಟಿವ್​ ಎನರ್ಜಿ ಇದೆ. ದೇವಸ್ಥಾನದ ಒಳಗೆ ಹೋದಾಗ ಆ ಫೀಲ್​ ಬರುತ್ತದೆ. ಇಲ್ಲಿಗೆ ಮತ್ತೆ ಮತ್ತೆ ಬರುತ್ತೇನೆ’ ಎಂದು ಮಾಲಾಶ್ರೀ ಹೇಳಿದ್ದಾರೆ.