‘ಕಲ್ಕಿ 2898 ಎಡಿ’ ಸಿನಿಮಾದ ಬುಜ್ಜಿ ಕಾರು ನೋಡಲು ಮುಗಿಬಿದ್ದ ಬೆಂಗಳೂರು ಮಂದಿ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಿಂಚಿರುವ ಬುಜ್ಜಿ ಕಾರು ಈಗ ಬೆಂಗಳೂರಿನಲ್ಲಿ ನೋಡಲು ಸಿಗುತ್ತಿದೆ. ಇದರ ವಿಶೇಷತೆ ಏನು ಎಂಬುದನ್ನು ತಂಡದವರು ವಿವರಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್​ ಓಡಿಸಿರುವ ಈ ಕಾರು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೂ ಪ್ರೊಡಕ್ಷನ್​ ತಂಡದ ರಮೇಶ್​ ಅವರು ಉತ್ತರ ನೀಡಿದ್ದಾರೆ. 7 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾರು ತಯಾರಾಗಿದೆ.