ಜಾಸ್ತಿ ಕಿಚಾಯಿಸಿದರೆ ಬಳ್ಳಾರಿ ಜೈಲಿಗೆ ಹಾಕ್ತೀನಿ ಅಂತ ಪೊಲೀಸರು ಅಪರಾಧಿಗಳನ್ನು ಹೆದರಿಸುವಷ್ಟು ಖ್ಯಾತಿ ಬಳ್ಳಾರಿ ಜೈಲಿನದ್ದು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಕುಖ್ಯಾತ ರೌಡಿಗಳನ್ನು ಇಲ್ಲಿಗೆ ಶಿಫ್ಟ್ ಮಾಡುವ ಪರಿಪಾಠ ಶುರುವಾಯಿತು.