ರಾಮನ ಚಿತ್ರವುಳ್ಳ ಕಾಯಿನ್ ಗಳು ಇದೀಗ ಗಮನ ಸೆಳೆಯುತ್ತಿವೆ. ಜನರು ತಮ್ಮ ಸಂಗ್ರಹದಲ್ಲಿರುವ ರಾಮನ ಚಿತ್ರದ ಕಾಯಿನ್ ಗಳನ್ನು ಕಂಡು ರೋಮಾಂಚನಗೊಳ್ಳುತ್ತಿದ್ದಾರೆ. ಕ್ರಿಸ್ತ ಶಕ 1818 ಬ್ರಿಟೀಷ್ ಸರಕಾರ ನಮ್ಮ ಭಾರತ ದೇಶದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ಯು.ಕೆ.ಎಲ್ - ಒನ್ ಆಣೆ - ಈಸ್ಟ್ ಇಂಡಿಯಾ ಕಂಪನಿ ಎಂಬಂತೆ ಇಂಗ್ಲೀಷ್ ಅಕ್ಷರದಲ್ಲಿ ನಮೂದಿಸಲಾಗಿದೆ. ಮತ್ತು ಎರಡು ಬದಿ ಜೋಳದ ತೆನೆ ಇರುವ ಸುಮಾರು ಏಳು ನಾಣ್ಯಗಳು ಉಡುಪಿಯ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿದೆ. ಸಮಾಜ ಸೇವಕ ಕಿನ್ನಿಮೂಲ್ಕಿಯ ಕೃಷ್ಣಮೂರ್ತಿ ಆಚಾರ್ಯರು ಸಂಗ್ರಹಿಸಿದ ಈ ನಾಣ್ಯಗಳು ವಿಶೇಷ ಮಹತ್ವ ಪಡೆದು ಕೊಂಡಿವೆ