ರಾಮ್ ಚರಣ್-ಉಪಾಸನಾಗೆ ಹೆಣ್ಣಮಗು; ಆಸ್ಪತ್ರೆಗೆ ಬಂದ ಚಿರಂಜೀವಿ

ರಾಮ್ ಚರಣ್ ಹಾಗೂ ಉಪಾಸನಾ ಅವರ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ ಆಗಿದೆ. ಇಂದು ಮುಂಜಾನೆ (ಜೂನ್ 20) ಉಪಾಸನಾ ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಈ ದಂಪತಿ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ತಾತ ಆದ ವಿಚಾರ ತಿಳಿಯುತ್ತಿದ್ದಂತೆ ಚಿರಂಜೀವಿ ಕುಟುಂಬ ಆಸ್ಪತ್ರೆಗೆ ಆಗಮಿಸಿದೆ.