ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್

ನಿರ್ದೇಶಕ ತರುಣ್ ಸುಧೀರ್ ಅವರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಅವರ ಜೊತೆ ಪತ್ನಿ ಸೋನಲ್ ಮಾಂತೆರೋ ಕೂಡ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ತರುಣ್ ಸುಧೀರ್​ ಅವರು ದರ್ಶನ್​ ಅವರನ್ನು ನೆನಪಿಸಿಕೊಂಡರು. ‘ಈ ಬಾರಿ ದರ್ಶನ್​ ಅವರು ಬಂದಿಲ್ಲ. ಹೊರಗೆ ಇದ್ದಿದ್ದರೆ ಅವರು ಖಂಡಿತವಾಗಿಯೂ ಬರುತ್ತಿದ್ದರು’ ಎಂದು ತರುಣ್ ಸುಧೀರ್ ಹೇಳಿದ್ದಾರೆ.