ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ತನ್ನಷ್ಟಕ್ಕೆ ನಡೆದುಹೋಗುತ್ತಿದ್ದ 11 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ಪುಣೆ, ಮುಂಬೈ ಮತ್ತು ಥಾಣೆಯಲ್ಲಿ ಜನರ ಮೇಲೆ ಇದೇ ರೀತಿಯ ನಾಯಿಗಳ ದಾಳಿಗಳು ವರದಿಯಾಗಿವೆ. ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯು ರಾಜ್ಯಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಇತ್ತೀಚೆಗೆ ವಾಕಿಂಗ್ ಹೋಗಿದ್ದ ಮಹಿಳೆ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿ ಆಕೆ ಮೃತಪಟ್ಟ ಘಟನೆ ನಡೆದಿತ್ತು.