ವನ್ಯ ಪ್ರಾಣಿಗಳು ತಮ್ಮ ವ್ಯಾಪ್ತಿ ಪ್ರದೇಶವನ್ನು ತಮ್ಮದೇ ಆದ ರೀತಿಯಲ್ಲಿ ಮಾರ್ಕ್ ಮಾಡಿಕೊಂಡಿರುತ್ತವೆ. ಕೆಲವು ಮರಬಂಡೆಗಳಿಗೆ ಮೈ ಉಜ್ಜಿ ಮಾರ್ಕ್ ಮಾಡಿಕೊಂಡಿದ್ದರೆ ಇನ್ನೂ ಕೆಲವು ಗಿಡಪೊದೆಗಳ ಮೇಲೆ ಮೂತ್ರ ವಿಸರ್ಜಿಸಿ ಇದು ನನ್ನ ಏರಿಯಾ, ಪ್ರವೇಶ ನಿಷಿದ್ಧ; ಅತಿಕ್ರಮಣಕಾರರನ್ನು ದಂಡಿಸಲಾವುದು ಎಂಬ ಸಂದೇಶ ನೀಡುತ್ತವೆ.