ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಕಾರ ಸ್ಟಾಂಪೀಡ್​​ನಲ್ಲಿ 11 ಜನ ಮೃತಪಟ್ಟು 33 ಜನ ಗಾಯಗೊಂಡಿದ್ದಾರೆ. ಒಬ್ಬ ಮಹಿಳೆಗೆ ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿರುವ ವಿಚಾರ ಗೊತ್ತೇ ಇರಲಿಲ್ಲ ಎಂದು ಮಹೇಶ್ ಹೇಳುತ್ತಾರೆ. ಅವರು ಸಾಲಲ್ಲಿ ಕೊಂಚ ದೂರ ಇದ್ದರಂತೆ ಮಗಳು ಮುಂದೆ ಬಂದಿದ್ದಾಳೆ. ಜನರ ಚೀರಾಟ ನೂಕಾಟ ಕೇಳಿ ಮುಂದೆ ಬಂದು ನೋಡಿದಾಗ ತಮ್ಮ ಮಗು ಸತ್ತು ಬಿದ್ದಿರುವುದು ಕಂಡಿದೆ. ಆ ಸನ್ನಿವೇಶ ನೋಡಲು ಸಾಧ್ಯವಿರಲಿಲ್ಲ ಎಂದು ಮಹೇಶ್ ಹೇಳುತ್ತಾರೆ.