ಐದು ದಿನ, ಮೂರು ದೇಶ, ಜಿ7 ಶೃಂಗಸಭೆ, ಸೈಪ್ರಸ್​ಗೆ ಹೊರಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ಸೈಪ್ರಸ್​ಗೆ ತೆರಳಿದ್ದಾರೆ. ಅವರು ಐದು ದಿನಗಳ ಕಾಲ ವಿದೇಶ ಪ್ರವಾಸದಲ್ಲಿರಲಿದ್ದು, ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಜೂನ್ 15 ರಿಂದ ಜೂನ್ 19 ರವರೆಗೆ ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಮೊದಲು ಸೈಪ್ರಸ್‌ಗೆ ಹೋಗಲಿದ್ದಾರೆ.