‘ಆ ರೀತಿ ಹೇಳಿದ್ದು ಅವರ ದೊಡ್ಡತನ’: ರವಿಚಂದ್ರನ್​ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​

ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂಎನ್​ ಕುಮಾರ್​ ನಡುವಿನ ವಿವಾದವನ್ನು ಬಗೆಹರಿಸಲು ಕನ್ನಡ ಚಿತ್ರರಂಗದ ಹಿರಿಯ ನಟರ ಮಧ್ಯಪ್ರವೇಶ ಆಗಿದೆ. ಈ ವಿಚಾರದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಮೊದಲು ಲೆಟರ್​ ನೀಡಿ ಎಂದು ರವಿಚಂದ್ರನ್​ ಹೇಳಿದ್ದರು. ಅವರ ಮಾತಿಗೆ ಇಂದು (ಜುಲೈ 19) ಶಿವರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ರವಿ ಅವರು ಆ ರೀತಿ ಹೇಳಿದ್ದು ಅವರ ದೊಡ್ಡತನ. ಅವರು ನನಗಿಂತ ಸೀನಿಯರ್​. ಅವರ ತಂದೆ ದೊಡ್ಡ ಪ್ರೊಡ್ಯೂಸರ್​ ಆಗಿದ್ದರು. ಅವರಿಗೆ ಅಪ್ಪಾಜಿ ಸಾಹುಕಾರರು ಎನ್ನುತ್ತಿದ್ದರು. ಈಗ ನಾನು ರವಿ ಸರ್​ ಅವರ ಸಲಹೆ ಕೇಳುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ.