ಅಂಬರೀಷ್ ಅವರು ಹೀರೋ ಆಗಿ ಮಿಂಚಿದವರು. ನಂತರ ರಾಜಕೀಯಕ್ಕೆ ಕಾಲಿಟ್ಟರು. ಅವರ ಪತ್ನಿ ಸುಮಲತಾ ಕೂಡ ಅಷ್ಟೇ, ಸಿನಿಮಾಗಳಲ್ಲಿ ನಟಿಸಿ, ನಂತರ ಮಂಡ್ಯ ಕ್ಷೇತ್ರದಿಂದ ಎಂಪಿ ಆದರು. ಅವರ ಮಗ ಅಭಿಷೇಕ್ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇವರು ರಾಜಕೀಯಕ್ಕೆ ಬರುತ್ತಾರೆ ಅನ್ನೋದು ಈ ಮೊದಲಿನಿಂದಲೂ ಇರುವ ಮಾತು. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಅವರು ಮಾತನಾಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ. ‘ಕುಟುಂಬ ರಾಜಕಾರಣ ನನಗೆ ಇಷ್ಟವಿಲ್ಲ. ನನ್ನ ಮಗ ರಾಜಕೀಯಕ್ಕೆ ಬರ್ತಾನೆ ಎಂದಾದಾಗ ನಾನು ನಿವೃತ್ತಿ ಪಡೆಯುತ್ತೇನೆ. ಅವನು ಬಂದಾಗ ನಾನು ರಾಜಕೀಯದಲ್ಲಿ ಇರಲ್ಲ’ ಎಂದಿದ್ದಾರೆ ಅವರು.