ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಹಿಟ್ ಆಗಲಿದೆ ಎಂದು ರಕ್ಷಿತ್ ಶೆಟ್ಟಿ ಭವಿಷ್ಯ ನುಡಿದಿದ್ದಾರೆ. ‘ನಾನು ಟ್ರಾವೆಲ್ ಮಾಡಿದ 10 ವರ್ಷದಲ್ಲಿ ಒಂದು ವಿಚಾರವನ್ನು ಗಮನಿಸಿದ್ದೀನಿ. ಯಾವಾಗ ನೀವು ಸಿನಿಮಾ ನಮಗಿಂತ ದೊಡ್ಡದು ಎಂದುಕೊಳ್ಳುತ್ತಿರೋ ಆಗ ಚಿತ್ರ ಹಿಟ್ ಆಗುತ್ತದೆ. ಸಿನಿಮಾಗಿಂತ ಮೊದಲು ನಾನು ಗುರುತಿಸಿಕೊಳ್ಳಬೇಕು ಎಂದು ನೀನಂದುಕೊಂಡರೆ ಆಗ ಸಿನಿಮಾ ಸೋಲುತ್ತದೆ’ ಎಂದಿದ್ದಾರೆ ರಕ್ಷಿತ್. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಜನರಿಗೆ ತಲುಪಬೇಕು ಎಂಬ ಉದ್ದೇಶ ರಕ್ಷಿತ್ಗೆ ಇದೆಯಂತೆ.