ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಮುಂಬೈಗೆ ಆರಂಭಿಕ ಆಘಾತ ಎದುರಾಗಿತ್ತು. ಹೀಗಾಗಿ ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ ಜೊತೆಗೂಡಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದರು. ಹೀಗಾಗಿ ಈ ಜೊತೆಯಾಟವನ್ನು ಮುರಿಯುವ ಸಲುವಾಗಿ ನಾಯಕ ರುತುರಾಜ್, ನೂರ್ ಅಹ್ಮದ್ಗೆ ಬೌಲಿಂಗ್ ಜವಬ್ದಾರಿ ನೀಡಿದರು. ಈ ಓವರ್ನಲ್ಲಿ ಮುಂದೆ ಬಂದು ಬಿಗ್ ಶಾಟ್ ಹೊಡೆಯಲು ಯತ್ನಿಸಿದ ಸೂರ್ಯನನ್ನು ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಔಟ್ ಮಾಡಿದರು.