ಶ್ರೀರಾಮ ತಂದೆಗೆ ಹುಟ್ಟಿಲ್ಲ, ಆತ ದಶರಥನ ಮಗನೇ ಅಲ್ಲ: ಸಾಹಿತಿ ಪ್ರೊ ಕೆ ಭಗವಾನ್ ವಿವಾದಾತ್ಮಕ ಹೇಳಿಕೆ

ಸಾಹಿತಿ ಪ್ರೊ. ಕೆ ಭಗವಾನ್ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ಹೊಸ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ದಾವಣಗೆರೆಯ ಹರಿಹರ ತಾಲೂಕಿನ ಹಣಗವಾಡಿ ಬಳಿ ಇರುವ ಪ್ರೊ. ಕೃಷ್ಣಪ್ಪ ಭವನದಲ್ಲಿ ನಿನ್ನೆ‌ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ತಂದೆಗೆ ಹುಟ್ಟಿಲ್ಲ. ಆತ ದಶರಥನ ಮಗನೇ ಅಲ್ಲ ಎಂದಿದ್ದಾರೆ.