ರಾಜ್ಯಾಧ್ಯಕ್ಷನ ಹುದ್ದೆಯನ್ನು ಅಷ್ಟು ಸುಲಭವಾಗಿ ವಿಜಯೇಂದ್ರಗೆ ಬಿಟ್ಟುಕೊಡಲು ಬಸನಗೌಡ ಯತ್ನಾಳ್ ತಯಾರಿಲ್ಲ. ಅವರ ಬಣ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಸರಿಸುವ ಪಣತೊಟ್ಟಿದೆ. ವಿಜಯೇಂದ್ರ ಅವರ ಕಾರ್ಯವೈಖರಿ ತಮಗಿಷ್ಟವಿಲ್ಲ ಎಂದು ಯತ್ನಾಳ್ ಬಣ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದರೆ, ವಿಜಯೇಂದ್ರ ಅಧ್ಯಕ್ಷನಾದ ದಿನದಿಂದ ಕೋಪ ಕಾರುತ್ತಿರುವ ಯತ್ನಾಳ್ ವರಿಷ್ಠರ ಜೊತೆ ಮಾತಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.