ನೆಲಮಂಗಲ: ಶೌಚಾಲಯದ ಕಮೋಡ್​ನಲ್ಲಿ ಅವಿತ ನಾಗರಹಾವು; ಬುಸ್ ಬುಸ್ ಶಬ್ದಕ್ಕೆ ಬೆದರಿದ ಮನೆಯೊಡತಿ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಅಂದ್ರಹಳ್ಳಿಯ ಮನೆಯೊಂದರ ಶೌಚಾಲಯದ ಕಮೋಡ್​ನಲ್ಲಿ ನಾಗರಹಾವು ಪತ್ತೆಯಾಗಿಯಾಗಿದೆ. ಬಾತ್​ರೂಮ್ ಕಂ ಶೌಚಾಲಯಕ್ಕೆ ಹೋಗಿದ್ದ ಮನೆಯೊಡತಿಗೆ ಬುಸ್ ಬುಸ್ ಶಬ್ದ ಕೇಳಿಸಿದೆ. ಈ ವೇಳೆ ಬೆದರಿದ ಮನೆಯೊಡತಿಯು ಪತಿಗೆ ತಿಳಿಸಿದ್ದಾರೆ. ನಂತರ ಸ್ನೇಕ್ ನಾಗೇಂದ್ರ ಅವರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಕಮೋಡ್​ನಲ್ಲಿ ಅವಿತಿದ್ದ ನಾಗರ ಹಾವನ್ನು ರಕ್ಷಿಸಿ ಹೆಸರಘಟ್ಟ ಅರಣ್ಯದಲ್ಲಿ ಬಿಟ್ಟಿದ್ದಾರೆ.