ನಾಗ್ಪುರದಲ್ಲಿ ಮಾರ್ಚ್ 17ರಂದು ನಡೆದ ಕೋಮು ಹಿಂಸಾಚಾರದ ಪುಮುಖ ಆರೋಪಿ ಫಾಹಿಂ ಖಾನ್ ಮನೆಯನ್ನು ನೆಲಸಮ ಮಾಡಲಾಗಿದೆ. ಔರಂಗಜೇಬನ ಸಮಾಧಿ ತೆರವಿಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆದಿತ್ತು. ದೇಶದ್ರೋಹದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗ್ಪುರದ ಯಶೋಧರ ನಗರ ಪ್ರದೇಶದ ಸಂಜಯ್ ಬಾಗ್ ಕಾಲೋನಿಯಲ್ಲಿರುವ ಈ ಆಸ್ತಿಯನ್ನು ಖಾನ್ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ .