ಚಿನ್ನಸ್ವಾಮಿ ಸ್ಟೇಡಿಯಂಗೆ ಪೊಲೀಸ್ ಸೆಕ್ಯುರಿಟಿ

ICC World Cup 2023: ಹಮಾಸ್ ಮತ್ತು ಇಸ್ರೇಲ್ ಸೇನೆಯ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ಸ್ಥಳೀಯ ಸಂಘಟನೆಗಳು ಪ್ಯಾಲೆಸ್ಟೀನ್ ಗೆ ಬೆಂಬಲ ಸೂಚಿಸುತ್ತಿವೆ ಮತ್ತು ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯ ತಲಾಶ್ ನಲ್ಲಿವೆ. ವಿಶ್ವಕಪ್ ಟೂರ್ನಿಯ ಪಂದ್ಯಕ್ಕಿಂತ ದೊಡ್ಡದೆನಿಸುವ ವೇದಿಕೆ ಎಲ್ಲಿ ಸಿಕ್ಕೀತು? ಹಾಗಾಗೇ, ಮುಂಜಾಗ್ರತೆಯ ಕ್ರಮವಾಗಿ ಮತ್ತು ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸುವುದನ್ನು ತಡೆಯಲು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಪೊಲೀಸ್ ಭದ್ರೆ ವ್ಯವಸ್ಥೆ ಮಾಡಲಾಗಿದೆ.