ನಟ ಶಿವರಾಜ್ಕುಮಾರ್ ನಟನೆಯ ಜೊತೆಗೆ ರಾಜಕೀಯದ ಜೊತೆಗೂ ನಂಟು ಬೆಳೆಸಿಕೊಂಡಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ ನಂತರ ಶಿವಣ್ಣ ಕೂಡ ಪ್ರಚಾರದಲ್ಲಿ ಭಾಗಿ ಆದರು. ಸೊರಬದ ಮಧು ಬಂಗಾರಪ್ಪ ಪರ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಮಧು ಬಂಗಾರಪ್ಪ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನವೂ ಸಿಗುತ್ತಿದೆ. ಈ ವಿಚಾರ ಶಿವರಾಜ್ಕುಮಾರ್ ಅವರಿಗೆ ಖುಷಿ ತಂದಿದೆ. ಶಿವಣ್ಣ, ಗೀತಾ ಶಿವರಾಜ್ಕುಮಾರ್ ಹಾಗೂ ಮಧು ಬಂಗಾರಪ್ಪ ಒಂದೇ ಕಾರಲ್ಲಿ ತೆರಳಿದ್ದಾರೆ. ಈ ವೇಳೆ ಶಿವಣ್ಣ ಕಾರು ಡ್ರೈವ್ ಮಾಡಿದ್ದು ವಿಶೇಷವಾಗಿತ್ತು.