ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಮೊಂಘಮಾ ಪ್ರದೇಶದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆ ನಾಶವಾಗಿದೆ. ಆ ಮನೆ ಆಸಿಫ್ ಶೇಖ್ ಎಂಬ ಭಯೋತ್ಪಾದಕನದ್ದಾಗಿದ್ದು, ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕರ ಜೀವವನ್ನು ಬಲಿ ಪಡೆದ ಘಟನೆಯಲ್ಲಿ ಆತನ ಹೆಸರು ಕೂಡ ಕೇಳಿಬಂದಿತ್ತು.