ಕಾರವಾರ: ಚಾರ್ಸಿ ತುಂಡಾಗಿ ರಸ್ತೆಯಲ್ಲೇ ಪಲ್ಟಿಯಾದ ಬಸ್​, ಹಲವರಿಗೆ ಗಾಯ

ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ನಡುರಸ್ತೆಯಲ್ಲಿ ಚಾರ್ಸಿ ತುಂಡಾಗಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು ಐವತ್ತಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಬಸ್ಸಿನ ಹಿಂಬದಿ ಚಾರ್ಸಿ ಒಮ್ಮೆಲೆ ಕಟ್ ಆಗಿದ್ದು ಬಸ್ ರಸ್ತೆಯಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು.