80 ರ ದಶಕದಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಪ್ರಯತ್ನಗಳು ಆರಂಭಗೊಂಡಿದ್ದವು ಆದರೆ ಸಾಧ್ಯವಾಗಿರಲಿಲ್ಲ. ಅಟಲ ಬಿಹಾರಿ ವಾಜಪೇಯಿ ಸರ್ಕಾರ ಭಗೀರತ ಪ್ರಯತ್ನ ನಡೆಸಿದಾಗ್ಯೂ ಬಹುಮತದ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಬಿಲ್ ಅನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡಿತು ಎಂದು ಜೋಶಿ ಹೇಳಿದ್ದಾರೆ.