ಕನ್ನಡ ಸಿನಿಮಾ ಪ್ರೇಕ್ಷಕರಿಗೆ, ಪರಭಾಷೆಯವರಿಗೂ ಸಹ ಸಾಧುಕೋಕಿಲ ಹಾಸ್ಯನಟನಾಗಿ ಬಹಳ ಜನಪ್ರಿಯ. ಆದರೆ ಅವರೊಬ್ಬ ಬಹಳ ಒಳ್ಳೆಯ ಸಂಗೀತ ನಿರ್ದೇಶಕ. ಹಲವಾರು ನೆನಪುಳಿಯುವ ಹಾಡುಗಳನ್ನು ಸಾಧುಕೋಕಿಲ ನೀಡಿದ್ದಾರೆ. ನಿನ್ನೆಯಷ್ಟೆ ಬೆಂಗಳೂರು ಫಿಲಂ ಫೆಸ್ಟ್ಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಆಗಮಿಸಿದ್ದರು. ಈ ವೇಳೆ ತಮ್ಮ ಹಾಗೂ ತೆಲುಗಿನ ಸಂಗೀತ ನಿರ್ದೇಶಕರುಗಳ ನಡುವಿನ ಸಂಬಂಧದ ಬಗ್ಗೆ ಸಾಧುಕೋಕಿಲ ಮಾತನಾಡಿದರು. ಈಗ ತೆಲುಗಿನಲ್ಲಿ ಟಾಪ್ನಲ್ಲಿರುವ ತಮನ್, ತಮಿಳಿನ ಹ್ಯಾರಿಸ್ ಅವರುಗಳು ತಮಗಾಗಿ ಕೆಲಸ ಮಾಡಿದ್ದರು ಎಂದು ಸಾಧುಕೋಕಿಲ ಹೇಳಿದರು. ಇದು ದೇವಿಶ್ರೀ ಪ್ರಸಾದ್ಗೆ ಆಶ್ಚರ್ಯ ತಂದಿತು.