ಕೊಲೆ ಕೇಸ್​ನಲ್ಲೂ ದರ್ಶನ್​ಗೆ ಫ್ಯಾನ್ಸ್​ ಬೆಂಬಲ ನೀಡೋದು ಯಾಕೆ? ಉತ್ತರಿಸಿದ ಉಮಾಶ್ರೀ

ಕೊಲೆ ಆರೋಪದಲ್ಲಿ ನಟ ದರ್ಶನ್​ ಅರೆಸ್ಟ್​ ಆಗಿದ್ದು ಅನೇಕರಿಗೆ ಅಚ್ಚರಿ ಆಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರ ಹತ್ಯೆಯಲ್ಲಿ ದರ್ಶನ್​ ಮತ್ತು ಸಹಚರರ ಕೈವಾಡ ಇದೆ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ದರ್ಶನ್​ ಮೇಲೆ ಇಂಥ ಗಂಭೀರ ಆರೋಪ ಕೇಳಿಬಂದಿದ್ದರೂ ಕೂಡ ಅನೇಕ ಅಭಿಮಾನಿಗಳು ನಟನಿಗೆ ಬೆಂಬಲ ಸೂಚಿಸುತ್ತಿದ್ದಾರೆ. ದರ್ಶನ್​ ಪರವಾಗಿ ಕೆಲವು ಫ್ಯಾನ್ಸ್ ಕಮೆಂಟ್​ ಮಾಡುತ್ತಿದ್ದಾರೆ. ಅಂಥವರ ಮನಸ್ಥಿತಿ ಬಗ್ಗೆ ನಟಿ ಉಮಾಶ್ರೀ ಮಾತನಾಡಿದ್ದಾರೆ. ‘ಎಲ್ಲರಿಗೂ ಒಂದು ನಂಬಿಕೆ ಎನ್ನುವುದು ಇರುತ್ತದೆ. ನಾವು ಆರಾಧಿಸುವ, ಪೂಜಿಸುವ ವ್ಯಕ್ತಿಗಳ ಬಗ್ಗೆ ಆ ನಂಬಿಕೆ ಯಾವಾಗಲೂ ಇರುತ್ತೆ. ಜೊತೆಯಲ್ಲಿ ಕೆಲಸ ಮಾಡಿದ ನಮಗೂ ಹಾಗೆ ಅನಿಸುತ್ತದೆ. ನಾನು ಕೂಡ ಈಗ ಹಾಗೇ ಹೇಳಿದೆ. ತುಂಬ ಒಳ್ಳೆಯ ಹುಡುಗ, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಅಂತ. ಆ ನಂಬಿಕೆಯಿಂದಲೇ ಎಲ್ಲರೂ ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಅದು ತಪ್ಪು ಅಂತ ನಾವಾಗಲೀ, ನೀವಾಗಲೀ ಹೇಳೋಕೆ ಆಗಲ್ಲ’ ಎಂದಿದ್ದಾರೆ ಉಮಾಶ್ರೀ.