ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಗದರಿದ ಸಿದ್ದರಾಮಯ್ಯ

ಮೈಸೂರಿಗೆ ಹೋಗಿದ್ದ ಸಿದ್ದರಾಮಯ್ಯಗೆ ಅಲ್ಲಿ ಸುದ್ದಿಗಾರರಿಂದ ಪ್ರಶ್ನೆಗಳ ಸುರಿಮಳೆಯೇ ಆಯಿತು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಳಲಾದ ಸಾಲು ಸಾಲು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಂಯಮದಿಂದಲೇ ಉತ್ತರ ನೀಡಿದರು. ಕೆಲವೊಮ್ಮೆ ಮಾಧ್ಯಮದವರ ಪ್ರಶ್ನೆ ಅತಿರೇಕಕ್ಕೆ ಹೋದಾಗ ಗದರಿದ ಘಟನೆಯೂ ಆಯಿತು. ಸಾಲು ಸಾಲಾಗಿ ಪ್ರಶ್ನೆ ಕೇಳಲು ಹೋದ ಮಾಧ್ಯಮದವರೊಬ್ಬರಿಗೆ ಸಿದ್ದರಾಮಯ್ಯ ಗದರಿದರು.