ಹತ್ತಿ ಹೊಲಕ್ಕೆ ಬೈಕ್ ಮೂಲಕ ಎಡೆ ಹೊಡೆದ ರೈತ

ಧಾರವಾಡ: ಈ ಭಾಗದಲ್ಲಿ ಈ ಬಾರಿ ಮುಂಗಾರು ತುಸು ತಡವಾಗಿ ಬಂದಿತಾದರೂ ಇತ್ತೀಚೆಗೆ ಉತ್ತಮ ಮಳೆಯಾಗಿ ರೈತಾಪಿ ವರ್ಗದಲ್ಲಿ ನವೋತ್ಸಾಹ ಮೂಡಿಸಿದೆ. ನಾನಾ ಬವಣೆಗಳನ್ನು ಪಡುವ ರೈತ ತನ್ನ ಉಳುಮೆ ಮೂಲಕವೇ ಬದುಕು ಕಟ್ಟಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿರುತ್ತಾನೆ. ಮಧ್ಯೆ ಮಧ್ಯೆ ಹೊಸ ಸಾಧನ, ಸಾಹಸಗಳನ್ನೂ ಹುಟ್ಟುಹಾಕುತ್ತಿರುತ್ತಾನೆ. ಇದೀಗ ಧಾರವಾಡ ಜಿಲ್ಲೆಯ ನವಲಗುಂದ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ರೈತ ಬೈಕ್ ಮೂಲಕ ವಿಶೇಷವಾಗಿ ಎಡೆ ಹೊಡೆದಿದ್ದಾನೆ.