ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಭಾರತ್ ಮಾತಾ ಕೀ ಅಂದಾಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಸೇರಿದಂತೆ ವಿಜ್ಞಾನಿಗಳು ಮತ್ತು ಬೇರೆ ಸಿಬ್ಬಂದಿ ವರ್ಗ ಒಕ್ಕೊರಲಿನಿಂದ ಜೈ ಅಂತ ಜೋರಾಗಿ ಕೂಗಿದರು. ಬಳಿಕ ಪ್ರಧಾನಿ ವಿಜ್ಞಾನಿಗಳಿಗೆ ಎರಡೂ ಕೈ ಜೋಡಿಸಿ ತಲೆಬಾಗಿ ವಂದಿಸಿದಾಗ ಎಲ್ಲರೂ ಎದ್ದುನಿಂತು ದೀರ್ಘ ಕರತಾಡನದ ಮೂಲಕ ಅವರಿಗೆ ಪ್ರತಿವಂದಿಸಿದರು.