ವಿವಾಹಕ್ಕೂ ಮುನ್ನ ಗೃಹಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ-ಭುವನ್​; ಹೇಗಿದೆ ನೋಡಿ ಹೊಸ ಮನೆ

ಸ್ಯಾಂಡಲ್​ವುಡ್​ನ ಖ್ಯಾತ ನಟಿ ಹರ್ಷಿಕಾ ಪೂಣ್ಣಚ್ಚ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟ ಭುವನ್​ ಪೊನ್ನಣ್ಣ ಜೊತೆ ಅವರು ಹಸೆಮಣೆ ಏರಲಿದ್ದಾರೆ. ಮದುವೆಗೂ ಮೊದಲು ಹರ್ಷಿಕಾ ಮತ್ತು ಭುವನ್​ ಗೃಹಪ್ರವೇಶ ಮಾಡಿದ್ದಾರೆ. ಭಾವಿ ಪತ್ನಿಗಾಗಿ ಭುವನ್​ ಅವರು ಕೊಡಗಿನಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಈ ತೋಟದ ಮನೆ ತುಂಬ ಸುಂದರವಾಗಿದೆ. ಕೊಡವ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಹರ್ಷಿಕಾ ಪ್ರವೇಶ ಮಾಡಿದ್ದಾರೆ. ಹರ್ಷಿಕಾ ಮತ್ತು ಭುವನ್​ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಈ ಜೋಡಿ ಹಕ್ಕಿಗಳ ಬಹುಕಾಲದ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ. ಆಗಸ್ಟ್​ 23 ಮತ್ತು 24ರಂದು ಅವರ ಮದುವೆ ನಡೆಯಲಿದೆ. ಇಬ್ಬರೂ ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರು ಹೊಸ ಪ್ರೊಡಕ್ಷನ್​ ಹೌಸ್​ ಕೂಡ ಆರಂಭಿಸಿದ್ದಾರೆ.