ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೊದಲ ರ್ಯಾಲಿ; ಮೋದಿ ನೋಡಲು ಜನಸಾಗರ

ಜಾರ್ಖಂಡ್​ನಲ್ಲಿ ಬಿಜೆಪಿ ಗೆಲುವು ಸಾಧಿಸಲು ಬುಡಕಟ್ಟು ಸಮುದಾಯದ ಮತಗಳು ನಿರ್ಣಾಯಕವಾಗಿವೆ. 2011ರ ಜನಗಣತಿಯ ಪ್ರಕಾರ ಜಾರ್ಖಂಡ್‌ನ ಜನಸಂಖ್ಯೆಯ ಕಾಲು ಭಾಗದಷ್ಟು ಬುಡಕಟ್ಟು ಜನಾಂಗದವರು ಇದ್ದಾರೆ ಮತ್ತು ರಾಜ್ಯದ 24 ಜಿಲ್ಲೆಗಳಲ್ಲಿ 21ರಲ್ಲಿ ಕನಿಷ್ಠ 1 ಲಕ್ಷದಷ್ಟು ಬುಡಕಟ್ಟು ಜನಾಂಗದವರಿದ್ದಾರೆ. ರಾಜ್ಯದ 81 ಅಸೆಂಬ್ಲಿ ಸ್ಥಾನಗಳಲ್ಲಿ (ಜೊತೆಗೆ 1 ನಾಮನಿರ್ದೇಶಿತ) 28 ಎಸ್‌ಟಿಗಳಿಗೆ ಮೀಸಲಾಗಿದೆ.