ಮೂಕ ಪ್ರಾಣಿಗಳಿಗೆ ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೂ ಕೆಟ್ಟದ್ದಂತೂ ಮಾಡಬಾರದು. ಹಾಗೊಂದಮ್ಮೆ ಕೆಟ್ಟ ಆಲೋಚನೆ ಇದ್ದರೆ ಏನಾಗುತ್ತೆ ನೀವೇ ನೋಡಿ. ರಸ್ತೆಯಲ್ಲಿ ನಿಂತಿದ್ದ ನಾಯಿಯನ್ನು ನೋಡಿದ ವ್ಯಕ್ತಿ ಅದಕ್ಕೆ ಒದೆಯಲು ಹೋಗಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಜಾರಿ ಬಿದ್ದ ಬಳಿಕ ಸಮತೋಲನ ಕಳೆದುಕೊಂಡು ಮತ್ತೆ ಏಳಲಾಗದಷ್ಟು ನೋವು ಅನುಭವಿಸುತ್ತಾನೆ. ನಾಯಿ ಎದುರೇ ತೀವ್ರ ಮುಜುಗರ ಅನುಭವಿಸಿದ್ದಾನೆ. ಬೀದಿ ನಾಯಿ ಸುರಕ್ಷಿತವಾಗಿತ್ತು. ಅದಕ್ಕೆ ನಾವು ಬೇರೆಯವರಿಗೇ ಏನಾಗಲಿ ಎಂದು ಬಯಸುತ್ತೇವೋ ಅದೇ ನಮ್ಮ ಪಾಲಿಗೂ ಬರುವುದು.