ರಾಹಿಲ್ ಹಾಸನದಿಂದ ಗಡೀಪಾರಾಗಿ ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿ. ಇವನ ಹಿನ್ನೆಲೆ ಆಧಾರದಲ್ಲಿ ಜೈಲಿನ ಅತಿ ಭದ್ರತಾ ವಿಭಾಗದಲ್ಲಿ ಇರಿಸಲಾಗಿದೆಯಂತೆ. ಇಲ್ಲಿಗೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಕಾರಾಗೃಹ ಅಧಿಕಾರಿಗಳ ಜಗಳ ಕಾಯುತ್ತಿದ್ದ ರಾಹಿಲ್ ನಿನ್ನೆ ಸಾಯಂಕಾಲ ತನಗೆ ಆಸ್ಪತ್ರೆಗೆ ಹೋಗಬೇಕೆಂದು ವಿನೋದ್ ಬಳಿ ವರಾತ ತೆಗೆದಿದ್ದಾನೆ.