ದಿನದಿನಕ್ಕೂ ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್​

ಜೋರು ಜೋರಾಗಿ ಜಗಳ ಮಾಡುವುದನ್ನೇ ಬಿಗ್ ಬಾಸ್ ಆಟ ಎಂದುಕೊಂಡಂತಿದೆ ಚೈತ್ರಾ ಕುಂದಾಪುರ. ದೊಡ್ಮನೆಯಲ್ಲಿ ಅವರ ವಿರುದ್ಧ ಅನೇಕರು ತಿರುಗಿ ಬಿದ್ದಿದ್ದಾರೆ. ರಜತ್ ಅವರಿಗೆ ಚೈತ್ರಾ ಅವರನ್ನು ಕಂಡರೆ ಆಗುವುದೇ ಇಲ್ಲ. ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಚೈತ್ರಾ ಅವರನ್ನು ರಜತ್ ಹೊರಗೆ ಇಟ್ಟಿದ್ದಾರೆ. ಹಾಗಾಗಿ ಚೈತ್ರಾ ಜಗಳ ಮಾಡಿದ್ದಾರೆ. ಕೋಪಗೊಂಡ ರಜತ್ ಅವರು, ‘ಅವಳಿಗೆ ದಿನದಿನವೂ ಹುಚ್ಚು ಜಾಸ್ತಿ ಆಗುತ್ತಿದೆ’ ಎಂದು ರಜತ್ ಹೇಳಿದ್ದಾರೆ. ‘ಹೌದು’ ಎಂದು ತ್ರಿವಿಕ್ರಮ್ ಧ್ವನಿಗೂಡಿಸಿದ್ದಾರೆ.