ಕಿಚ್ಚ ಸುದೀಪ್ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಅವರು ಸ್ಟಾರ್ ಪ್ರಚಾರಕರಾಗಿ ಎಂಟ್ರಿ ಕೊಟ್ಟ ಹೊರತಾಗಿಯೂ ಬಿಜೆಪಿಗೆ ಹೆಚ್ಚಿನ ಲಾಭ ಆಗಿಲ್ಲ. ಈಗ ಸುದೀಪ್ ಬಗ್ಗೆ ಸಚಿವ, ವಾಲ್ಮೀಕಿ ಸಮುದಾಯದ ಮುಖಂಡ ಕೆ.ಎನ್.ರಾಜಣ್ಣ ಮಾತನಾಡಿದ್ದಾರೆ. ‘ರಾಜ್ಕುಮಾರ್ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ಆದರೆ, ಅವರು ರಾಜಕೀಯದಿಂದ ದೂರ ಉಳಿದರು. ಇದಕ್ಕೆ ಅವರನ್ನು ದೇವತಾಮನುಷ್ಯ ಎನಿಸಿಕೊಂಡರು. ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆ’ ಎಂದರು ಅವರು.