ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ ಎಂದು ಹೃದ್ರೋಗ ತಜ್ಞ ಡಾ. ಮೋಹಿತ್ ಗುಪ್ತಾ ಹೇಳಿದ್ದಾರೆ. ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ಹೃದ್ರೋಗ ತಜ್ಞರಾಗಿರುವ ಗುಪ್ತಾ, ಕೋವಿಡ್ 19 ಲಸಿಕೆಗಳು ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ, ಬದಲಾಗಿ ಹೃದಯಾಘಾತ ಮತ್ತು ಎಲ್ಲಾ ಕಾರಣಗಳಿಂದ ಉಂಟಾಗುವ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.