ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಹಾಸನಾಂಬೆಯ ದರ್ಶನಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಇಂದು ಬೆಳಗ್ಗೆ ಕೇಂದ್ರ ಸಚಿವ ವಿ ಸೋಮಣ್ಣ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ದೇವಸ್ಥಾನ ಓಪನ್ ಆಗಿದ್ದು ಇವತ್ತು ನಾಲ್ಕನೆಯ ದಿನ. ಮುಂದಿನ ಆರು ದಿನಗಳ ಕಾಲ ಅದು ತೆರೆದಿರುವುದರಿಂದ ಇನ್ನೂ ಹಲವಾರು ಗಣ್ಯರು ಆಗಮಿಸುವ ನಿರೀಕ್ಷೆ ಇದೆ.