ಬೆಂಗಳೂರು, ನ.25: ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಯಾನ ನಗರಿಯಲ್ಲಿ ಕಾರವಳಿಯ ಕಂಬಳದ ವೈಭವ ಸಾರುತ್ತಿದೆ. ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ (Bengaluru Kambala) ನಡೆಯುತ್ತಿದ್ದು, ಕೋಣಗಳ ಮಾಲೀಕರು ಹಾಗೂ ಪರಿಚಾರಕರಿಗೆ ಮಾತ್ರವಲ್ಲದೆ, ಕಂಬಳ ವೀಕ್ಷಣೆಗೆ ಆಗಮಿಸುವ ಜನರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.