ಮುಡಾ ಹಗರಣ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆಯಲ್ಲಿ ವಾಸ್ತವ ಮರೆಮಾಚಲಾಗಿದೆ. ನಕಲಿ ಸಹಿ ಮಾಡಿ ವಂಚನೆ ಎಸಗಿದ್ದನ್ನು ನಮೂದಿಸಲಾಗಿಲ್ಲ. ಇದೇ ಅಂಶ ಮುಂದಿಟ್ಟುಕೊಂಡು ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.