ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ ತುಕಾಲಿ ಸಂತೋಷ್ ಅವರು ಮನರಂಜನೆ ನೀಡುತ್ತಿದ್ದಾರೆ. ಈ ವಾರದ ಫನ್ನಿ ಟಾಸ್ಕ್ನಲ್ಲಿ ಕಾರ್ತಿಕ್ ಮಹೇಶ್ಗೆ ತುಕಾಲಿ ಸಂತೋಷ್ ಅವರು ಮುತ್ತು ನೀಡಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಆ ಸನ್ನಿವೇಶ ಮತ್ತೆ ಮರುಕಳಿಸಿದೆ. ಕಿಚ್ಚ ಸುದೀಪ್ ಅವರ ಎದುರಲ್ಲೇ ಕಾರ್ತಿಕ್ ಮಹೇಶ್ಗೆ ತುಕಾಲಿ ಸಂತೋಷ್ ಅವರು ಕಿಸ್ ಮಾಡಿದ್ದಾರೆ. ಮನೆ ಮಂದಿಗೆಲ್ಲ ಕೀಟಲೆ ಮಾಡಿದ ತುಕಾಲಿ ಸಂತೋಷ್ ಅವರಿಗೆ ತಕ್ಕ ಪಾಠ ಕಲಿಸಲು ಮಹಿಳಾ ಸ್ಪರ್ಧಿಗಳು ಸ್ಕೆಚ್ ಹಾಕಿದ್ದಾರೆ. ನಮ್ರತಾ ಗೌಡ ಮತ್ತು ಸಿರಿ ಅವರು ವ್ಯಾಕ್ಸ್ ಸ್ಟ್ರಿಪ್ಸ್ ಮೂಲಕ ಸಂತೋಷ್ ಅವರ ಕಾಲಿನ ಕೂದಲನ್ನು ಕಿತ್ತಿದ್ದಾರೆ. ‘ಹೋಗಿ ಬಂದು ನನ್ನ ಕೂದಲಿಗೆ ಅಟ್ಯಾಕ್ ಮಾಡ್ತಾರೆ’ ಎಂದು ತುಕಾಲಿ ಸಂತೋಷ್ ಗೋಳು ತೋಡಿಕೊಂಡಿದ್ದಾರೆ. ಈ ಸಂಚಿಕೆ ಡಿ.31ರ ರಾತ್ರಿ 9 ಗಂಟೆಗೆ ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಪ್ರಸಾರ ಆಗಲಿದೆ. 24 ಗಂಟೆಯೂ ಫ್ರೀಯಾಗಿ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ನೋಡುವ ಅವಕಾಶ ಇದೆ.