ಅನಿರುದ್ಧ್ ಜತ್ಕರ್ ಅವರು ‘ಶೆಫ್ ಚಿದಂಬರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಬಾಣಸಿಗನ ಪಾತ್ರದಲ್ಲಿ ಅನಿರುದ್ಧ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ. ಈ ಸಿನಿಮಾದ ಸೆಟ್ನಲ್ಲಿ ಅನಿರುದ್ಧ್ ಅವರು ಬಿರಿಯಾನಿ ಮಾಡಿದ್ದಾರೆ. ಸಿನಿಮಾದಲ್ಲೂ ಅವರು ಬಿರಿಯಾನಿ ಮಾಡುವ ದೃಶ್ಯವಿದೆಯಂತೆ. ಆ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ. ‘ಸಿನಿಮಾದಲ್ಲೂ ನಾನು ಬಿರಿಯಾನಿ ಮಾಡಿದ್ದೀನಿ. ಯಾವ ಮಾಂಸದ ಬಿರಿಯಾನಿ ಅನ್ನೋದು ಮಾತ್ರ ಗೊತ್ತಿಲ್ಲ. ಸಿನಿಮಾದಲ್ಲೇ ನೋಡಿ’ ಎಂದಿದ್ದಾರೆ ಅನಿರುದ್ಧ್.