ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ದೊಡ್ಡ ಗಾತ್ರದ ಮರವೊಂದು ತೇಲಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ನೀರಿನ ಹರಿವಿನೊಂದಿಗೆ ಬೇರು ಸಮೇತ ತೇಲಿ ಬಂದ ಮರಕ್ಕೆ ಸೇತುವೆ ಅಡ್ಡವಾಯಿತು. ಆದರೆ, ಆ ಸೇತುವೆಯ ಅಡಿಯಲ್ಲಿ ತೂರಿಕೊಂಡ ಆ ಬೃಹತ್ ಮರ ಮತ್ತೆ ನೀರಿನೊಂದಿಗೆ ವಿಲೀನವಾಯಿತು. ಈ ದೃಶ್ಯವನ್ನು ನೋಡಲು ಸುತ್ತಲೂ ಊರಿನ ಜನರು ಸೇರಿದ್ದರು.