ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ

ನಟ ಪುನೀತ್ ರಾಜ್​ಕುಮಾರ್​ ಅವರು ನಿಧನರಾಗಿ 3 ವರ್ಷ ಕಳೆದಿದೆ. ಅವರ ಅಭಿಮಾನಿಗಳ ಮನದಲ್ಲಿ ಈ ನೋವು ಇಂದಿಗೂ ಇದೆ. ಪುನೀತ್ ರಾಜ್​ಕುಮಾರ್​ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಸೆಪ್ಟೆಂಬರ್​ 26ರಂದು ಈ ದೇವಾಲಯ ಲೋಕಾರ್ಪಣೆ ಆಗಿತ್ತು. ಅಪ್ಪು ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಎಂಬುವವರ ಮನೆಯ ಮುಂದೆ ಈ ದೇವಾಲಯ ನಿರ್ಮಾಣ ಆಗಿದೆ.