ಯುವ ರಾಜ್ಕುಮಾರ್ ಅವರು ಭಾನುವಾರ (ಏಪ್ರಿಲ್ 23) ಜನ್ಮದಿನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸೆಲೆಬ್ರೇಷನ್ ಜೋರಾಗಿಯೇ ಇತ್ತು. ಚಿತ್ರರಂಗದ ಅನೇಕರು ಬಂದು ಅವರಿಗೆ ವಿಶ್ ಮಾಡಿದ್ದಾರೆ. ನಟಿ ಸಪ್ತಮಿ ಗೌಡ ಈ ವೇಳೆ ಹಾಜರಿ ಹಾಕಿದ್ದರು. ಯುವ ರಾಜ್ಕುಮಾರ್ ಅವರ ‘ಯುವ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಅವರು ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ.