ಭೀಕರ ಬರದಲ್ಲೂ ಗದಗ ಜಿಲ್ಲೆಯ ರೈತರು ಔದಾರ್ಯ ಮೆರೆದಿದ್ದಾರೆ. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ 30 ಟ್ರ್ಯಾಕ್ಟರ್ ಮೇವು ನೀಡಿದ್ದಾರೆ. ಮಾಡಲಗೇರಿ ಗ್ರಾಮದ ರೈತರು ಪ್ರತಿ ವರ್ಷ ಹುಬ್ಬಳ್ಳಿ ಸಿದ್ದಾರೂಢ ಮಠದ ಗೋ ಶಾಲೆಗೆ ಸುಮಾರು 30 ಟ್ರ್ಯಾಕರ್ನಷ್ಟು ಮೇವು ನೀಡುತ್ತಾ ಬಂದಿದ್ದಾರೆ.